What is Birth? – பிறப்பின் விளக்கம் (Tamil Video) – Raja Yoga Series #07

What is Birth? – பிறப்பின் விளக்கம் (Tamil Video) – Raja Yoga Series #07


ಎಲ್ಲರಿಗೂ ನಮಸ್ಕಾರ ಇವತ್ತು ಮತ್ತೊಂದು ಕುತೂಹಲಕರವಾದ ವಿಷಯದ ಬಗ್ಗೆ ನೋಡೋಣ? ಹುಟ್ಟು ಅಂದರೆ ಏನು? ಆಧ್ಯಾತ್ಮಿಕ ದೃಷ್ಟಿಯಿಂದ ಜನ್ಮ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಈ ವಿಷಯದ ಬಗ್ಗೆ ಇಂದು ನೋಡೋಣ ಇದನ್ನು ತಿಳಿದುಕೊಳ್ಳುವ ಮೊದಲು ನೀವು ನನ್ನ playlist ನೋಡಬಹುದು, ಅದರಲ್ಲಿ…. ರಾಜಯೋಗದ ಬಗ್ಗೆ ತಿಳಿಸಿದ್ದೇನೆ….. ಆತ್ಮದ ವಿಷಯದ ಬಗ್ಗೆ ತಿಳಿಸಿದ್ದೇನೆ, ನೀವು ಅದನ್ನು ಸಹ ನೋಡಿ ವಿಡಿಯೋ ಒಂದಕ್ಕೊಂದು ಸಂಬಂಧ ಪಟ್ಟಿರುವುದರಿಂದ ನೀವು ಅದನ್ನು ನೋಡಿ ಆತ್ಮದ ಮೂಲ ನಿವಾಸ ಸ್ಥಾನ ‘ಶಾಂತಿಧಾಮ’ ಹಾಗಾದರೆ ಭೂಮಿಗೆ ಹೇಗೆ ಬರುತ್ತದೆ? ಇಲ್ಲಿ ಈಗಾಗಲೇ ಇರುವ ಗಂಡ ಹೆಂಡತಿ ಮದುವೆಯಾಗಿ ಒಟ್ಟಾಗಿ ಸೇರುವಾಗ… ಆ ಮಹಿಳೆ ಗರ್ಭ ಧರಿಸುತ್ತಾಳೆ ನಾವು ಅಂದುಕೊಳ್ಳುತ್ತೇವೆ ಆ ಮಹಿಳೆ ಗರ್ಭಿಣಿ ಆಗಿದ್ದಾಳೆ ಎಂದು, ಆದರೆ ಹಾಗಲ್ಲ ಗರ್ಭ ಧಾರಣೆ ಮಾಡುವ ಪರಿಕಲ್ಪನೆ ಏನೆಂದರೆ… ಮಗುವು ಜನಿಸಬೇಕಾಗಿರುವ Template ಸೃಷ್ಟಿಯಾಗುತ್ತದೆ ಅಂದರೆ ಕಣ್ಣು, ಮೂಗು, ಬಾಯಿ, ಹೃದಯ ಹೀಗೆ ಆಕಾರ ರಚನೆಯಾಗುವುದು ಆರಂಭದಲ್ಲಿ ರಚನೆ ಆಗುತ್ತೆ ಆದರೆ ಜೀವ ಇರುವುದಿಲ್ಲ ಸುಮಾರು ಮೂರನೆಯ ಅಥವಾ ನಾಲ್ಕನೆಯ ತಿಂಗಳಿನಲ್ಲಿ ಆತ್ಮ ಎನ್ನುವುದು ಶಾಂತಿಧಾಮದಿಂದ ನೇರವಾಗಿ ಬಂದು ಆ ಗರ್ಭದಲ್ಲಿರುವ ಮಗುವಿನ ಭೃಕುಟಿಯ ಮಧ್ಯದಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಆ ಮಹಿಳೆ ಗರ್ಭ ಧರಿಸಿದ ತಕ್ಷಣ ಆಗುವುದಿಲ್ಲ ಮೂರು ಅಥವಾ ನಾಲ್ಕನೆಯ ತಿಂಗಳಿನಲ್ಲಿ ಮಾತ್ರ ಮಗು ಕೈ ಕಾಲುಗಳನ್ನು ಅಲ್ಲಾಡಿಸುತ್ತದೆ, ಏಕೆಂದರೆ ಅಲ್ಲಿಯವರೆಗೂ ಜೀವ ಇರುವುದಿಲ್ಲ ಮೂರು ಅಥವಾ ನಾಲ್ಕು ತಿಂಗಳು ನಂತರವೇ ಒದೆಯುವುದು ಗೊತ್ತಾಗುತ್ತದೆ ನಾಲ್ಕರಿಂದ ಐದು ತಿಂಗಳು ಆದಾಗ ಆಗುತ್ತದೆ ಮಗು ಗರ್ಭದಲ್ಲಿ ಬಹಳ ಚಿಕ್ಕದು ಹಾಗಾಗಿ ಅದು ಒದೆಯುವುದು ಗೊತ್ತಾಗುವುದಿಲ್ಲ ಎಂದು ತಪ್ಪಾಗಿ ತಿಳಿದಿದ್ದಾರೆ ಆ ಮಗುವಿಗೆ ಮೂರು ಅಥವಾ ನಾಲ್ಕು ತಿಂಗಳಿನಲ್ಲಿ ಆತ್ಮ ಪ್ರವೇಶ ಆಗುತ್ತದೆ… ಇದಾದನಂತರ ಆ ಮಗು ಬೆಳೆಯುತ್ತದೆ ನಂತರ ಆ ಮಗು ಒಂಬತ್ತನೇ ತಿಂಗಳಿನಲ್ಲಿ ಹೊರಗೆ ಬರುತ್ತದೆ ಮೊದಲೇ ತಿಳಿಸಿದ್ದೆ ಇದೊಂದು ನಾಟಕ , ನಾವೆಲ್ಲರೂ ಇಲ್ಲಿ ಪಾತ್ರ ಮಾಡುತ್ತಿದ್ದೇವೆ….. ಈ ನಾಟಕದಲ್ಲಿ ಆ ಮಗುವಿಗೆ ಯಾವ ಪಾತ್ರವಿದೆಯೊ ಅದನ್ನು ನಟಿಸುತ್ತದೆ ತಂದೆ ತಾಯಿಗೆ ಮಗುವಾಗಿ, ಒಡಹುಟ್ಟಿದವರ ಜೊತೆ ಸಹೋದರ,ಸಹೋದರಿಯಾಗಿ ಓದುತ್ತದೆ, ಬೆಳೆಯುತ್ತದೆ, ತನ್ನ ಪಾತ್ರವನ್ನು ನಿರ್ವಹಿಸುತ್ತದೆ. ಒಂದು ಸಮಯದಲ್ಲಿ ಆ ವ್ಯಕ್ತಿ ಸಾಯುತ್ತಾನೆ ಸಾವಿನ ಬಗ್ಗೆ ಇನ್ನೊಂದು ವಿಡಿಯೋದಲ್ಲಿ ತಿಳಿಸುತ್ತೇನೆ ಸಹಜವಾಗಿ ಮರಣ ಹೊಂದಿದ್ದರೆ, ಹದಿಮೂರು ದಿನಗಳ ನಂತರ… ಬೇರೆಯೊಂದು ಶರೀರವನ್ನು ಪ್ರವೇಶಿಸುತ್ತದೆ, ಈ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ ಅಂದರೆ ಇನ್ನೊಬ್ಬ ಮಹಿಳೆ ಈಗಾಗಲೇ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ, ಹದಿಮೂರು ದಿನದ ನಂತರ ಆ ಮಹಿಳೆಯ ಗರ್ಭದಲ್ಲಿ ಹೋಗಬೇಕು ಎಂದು ನಾಟಕದಲ್ಲಿ ಮೊದಲೇ ನಿರ್ಧಾರವಾಗಿದ್ದರೆ, ಆ ಆತ್ಮ ಪ್ರವೇಶ ಆಗುತ್ತದೆ ಈ ನಾಟಕವೇ ಪೂರ್ವ ನಿಶ್ಚಿತವಾಗಿದೆ. ಪರಮಾತ್ಮನ ನಿರ್ದೇಶನದಂತೆ ನಾವೆಲ್ಲಾ ನಟಿಸುತ್ತಿದ್ದೇವೆ ಇದರಲ್ಲಿ ಆಶ್ಚರ್ಯಪಡಲು ಏನಿಲ್ಲ, ಒಂದು ದೃಶ್ಯವನ್ನು ಸಹ ನಾವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಈ ನಾಟಕ ಕಲ್ಯಾಣಕಾರಿಯೆ, ಅದಕ್ಕೆ ಭಗವದ್ಗೀತೆಯಲ್ಲಿ ಹೇಳಲಾಗಿದೆ, ಯಾವುದು ನಡೆದಿದೆಯೋ ಒಳ್ಳೆಯದಕ್ಕೆ ನಡೆದಿದೆ…. ಏನು ನಡೆಯುತ್ತಿದೆಯೋ ಒಳ್ಳೆಯದೇ ಆಗುತ್ತಿದೆ… ಮುಂದೆ ಏನು ನಡೆಯುವುದೋ ಅದು ಒಳ್ಳೆಯದೇ ಆಗಲಿದೆ. ಇದರಲ್ಲಿ ಸ್ವಾರಸ್ಯಕರವಾದ ಒಂದು ವಿಷಯವೇನೆಂದರೆ ಒಬ್ಬ ವ್ಯಕ್ತಿ ಮರಣ ಹೊಂದಿದ್ದಾನೆ ಅಂದುಕೊಳ್ಳೋಣ ಹದಿಮೂರು ದಿನಗಳ ನಂತರ ಒಂದು ಮಹಿಳೆಯ ಗರ್ಭದಲ್ಲಿ ಪ್ರವೇಶಿಸುತ್ತದೆ, ಆ ಮಹಿಳೆ ಈಗಾಗಲೆ ಮೂರು ತಿಂಗಳ ಬಸಿರಾಗಿದ್ದಾಳೆ… ಒಂದು ಮಗು ಹುಟ್ಟಲು ಒಂಬತ್ತು ತಿಂಗಳು ಆಗುತ್ತೆ ಹಾಗಾಗಿ ಒಂದು ಮಗುವು ಗರ್ಭದಲ್ಲಿ ಇರುವುದು ಗರಿಷ್ಟ 6 -7 ತಿಂಗಳು ಮಾತ್ರ ನಂತರ ಆ ಮಗು ಜನಿಸುತ್ತದೆ ಇಲ್ಲಿ ಒಬ್ಬ ವ್ಯಕ್ತಿ ಸತ್ತರೆ…. ಇನ್ನು ಏಳು ತಿಂಗಳಿನಲ್ಲಿ ಇನ್ನೊಂದು ಮನೆಯಲ್ಲಿ ಮಗುವಾಗಿ ಜನಿಸುತ್ತದೆ ಆಗ ಆ ಮನೆಯಲ್ಲಿ ಬಹಳ ಸಂತೋಷದಿಂದ ಸಿಹಿ ಹಂಚಿ ಆಚರಿಸುತ್ತಾರೆ. ಅದಾದ ನಾಲ್ಕು ತಿಂಗಳ ನಂತರ ಮೃತರ ಮನೆಯಲ್ಲಿ ದುಃಖದಿಂದ ಆ ಆತ್ಮದ ವರ್ಷದ ತಿಥಿಯನ್ನು ಮಾಡುತ್ತಾರೆ. ತೀರಿಕೊಂಡು ಒಂದು ವರ್ಷ ಆಯಿತು ಎಂದು ಒಂದೇ ಆತ್ಮಕ್ಕೆ ಒಂದು ಕಡೆ… ತಿಥಿಯನ್ನು ಮತ್ತು ಇನ್ನೆರಡು ಮೂರು ತಿಂಗಳಿನಲ್ಲಿ ಇನ್ನೊಂದು ಕಡೆ ಮೊದಲ ವರ್ಷದ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಈ ಜೀವನದ ನಿರಂತರತೆಯನ್ನು ಅರಿತರೆ ಮಾತ್ರ ಇದು ತಿಳಿಯುವುದು ನೀವು ಭಾವಿಸಬಹುದು ಇದೆಲ್ಲ ನಿಮಗೆ ಹೇಗೆ ತಿಳಿಯಿತು, ಎಲ್ಲಿಂದ ಕಲಿತಿರಿ ಎಂದು.. ನಾನು ಇದನ್ನು ‘ರಾಜಯೋಗ’ದಿಂದ ಕಲಿತೆ ನೀವು Youtubeನಲ್ಲಿ ’13th Day’ ಬ್ರಹ್ಮಕುಮಾರೀಸ್ ಎಂದು ಒಂದು ವಿಡಿಯೋ ಇದೆ ಅದನ್ನ ನೋಡಿ, ಅದರಲ್ಲಿ ಈ ಹುಟ್ಟು ಮತ್ತು ಸಾವಿನ ರಹಸ್ಯದ ಬಗ್ಗೆ ಆಳವಾಗಿ ತಿಳಿಸಿದೆ. ನಾನು ಅದರಿಂದ ತಿಳಿದೆ, ನನಗೆ ಅದು ಬಹಳ ಮನಗಾಣಿಸಿತು, ಹಾಗಾಗಿ ಈ ವಿಡಿಯೋವನ್ನು ಹಾಕಿದೆ ಇದರ ಬಗ್ಗೆ ನಾನು ಯಾರೊಂದಿಗೂ ವಾದಿಸಲು ಬಯಸುವುದಿಲ್ಲ, ಇದನ್ನು ಒಂದು ಆಧ್ಯಾತ್ಮಿಕ ದೃಷ್ಟಿಯಿಂದ ಹೇಳುತ್ತಿದ್ದೇನೆ ಅಷ್ಟೆ. ಕೆಲವರಿಗೆ ಮನುಷ್ಯ ಜನ್ಮ ಒಂದು ಮಾತ್ರ ಇರುವುದು ಎಂದು ನಂಬಿದ್ದಾರೆ, ಅದು ಅವರಿಗೆ ಬಿಟ್ಟಿದ್ದು. ಅದರ ಬಗ್ಗೆ ಚರ್ಚಿಸಲು ನಾನು ಬಯಸುವುದಿಲ್ಲ, ನೀವು ಪರಿಶೀಲಿಸಿ ನಂತರ ನಿಮಗೆ ಮನವರಿಕೆಯಾದರೆ ಸ್ವೀಕರಿಸಿ, ಇಲ್ಲವೆಂದರೆ ನಿಮಗೆ ಯಾವುದು ಸರಿ ಅನ್ನಿಸುತ್ತದೆಯೋ ಅದನ್ನು ಅನುಸರಿಸಿ. ಇಲ್ಲಿ ಯಾವುದು ವಾದ ವಿವಾದವಿಲ್ಲ ಅರ್ಥವಾಯಿತೆ ನಿಮಗೆ ನನ್ನ ವಿಡಿಯೋ ಇಷ್ಟವಾಗಿದ್ದರೆ… ಕೆಳಗೆ Subscribe ಮಾಡಿ ಆಗ ನಾನು ಸತತವಾಗಿ ಹಾಕುವ ವಿಡಿಯೋವನ್ನು ನೀವು ನೋಡಬಹುದು ಅಲ್ಲಿ ನಿಮಗೆ ನನ್ನ ವಿಡಿಯೋಗಳ playlist ಇರುತ್ತೆ, ಇದೊಂದು ಸರಣಿಯಲ್ಲಿ ಹಾಕುತ್ತಿದ್ದೇನೆ, ಕೆಲವರಿಗೆ ದಿಢೀರನೆ ಈ ವಿಡಿಯೋ ನೋಡಿದಾಗ ಅರ್ಥವಾಗದಿರಬಹುದು ಆದ್ದರಿಂದ ನನ್ನ ಮೊದಲ ವಿಡಿಯೋದಲ್ಲಿ ‘ನಾನು ಯಾರು’ ಎಂಬ ವಿಷಯದಿಂದ ನೋಡಿದಾಗ ನಿಮಗೆ ಅರ್ಥವಾಗುತ್ತದೆ. ನಿಮಗೆ ಇಷ್ಟವಾಗಿದ್ದರೆ ಸ್ನೇಹಿತರೊಂದಿಗೆ ಈ ವಿಡಿಯೋವನ್ನು Share ಮಾಡಿ ಧನ್ಯವಾದಗಳು!