What is Death? – மரணம் என்றால் என்ன? (Tamil Video) – Raja Yoga Series #08

What is Death? – மரணம் என்றால் என்ன? (Tamil Video) – Raja Yoga Series #08


ಎಲ್ಲರಿಗೂ ನಮಸ್ಕಾರ ಹಿಂದಿನ ವಿಡಿಯೋದಲ್ಲಿ “ಹುಟ್ಟು ಅಂದರೆ ಏನು?” ಎಂದು ನೋಡಿದೆವು ಈ ವಿಡಿಯೋದಲ್ಲಿ “ಮರಣ ಅಂದರೆ ಏನು?”, ಸಾವಿನ ನಂತರ ಏನಾಗುತ್ತದೆ? ಎಂದು ನೋಡೋಣ ಈ ವಿಷಯಗಳ ಬಗ್ಗೆ ಇಂದು ನೋಡೋಣ. ಮರಣದಲ್ಲಿ ಎರಡು ವಿಧವಿದೆ, ಒಂದು ಸಹಜ/ನೈಸರ್ಗಿಕ ಸಾವು ಇನ್ನೊಂದು ಅಸಹಜ ಸಾವು ಈಗ ನೈಸರ್ಗಿಕ ಸಾವಿನ ಬಗ್ಗೆ ನೋಡೋಣ ಉದಾಹರಣೆಗೆ, ಒಬ್ಬರು ಮಲಗಿರುವಾಗಲೇ ಸಾವು ಸಂಭವಿಸಿದೆ ಎಂದು ತಿಳಿದುಕೊಳ್ಳೋಣ ವಾಸ್ತವಿಕವಾಗಿ ಏನು ನಡೆಯುತ್ತದೆ ಎಂದರೆ… ಆತ್ಮಕ್ಕೆ ವಿನಾಶವೇ ಇಲ್ಲ ಏನು ನಡೆಯುತ್ತದೆ ಎಂದರೆ, ನಾನೀಗಾಗಲೇ ತಿಳಿಸಿದ್ದೆ, ನನ್ನ ಹಿಂದಿನ ವಿಡಿಯೋಗಳನ್ನು ನೋಡಿದರೆ ನಿಮಗೆ ತಿಳಿಯುತ್ತದೆ ಇದರಲ್ಲಿ ಮೂರು ವಿಷಯಗಳಿವೆ ಮೊದಲನೆಯದು ಭೃಕುಟಿಯ ಮಧ್ಯದಲ್ಲಿ ಆತ್ಮ/ಜೀವ ನೆಲೆಸಿದೆ ಎರಡನೆಯದು ಮೂಳೆ ಮಾಂಸದಿಂದ ಕೂಡಿರುವ ದೇಹ ಮೂರನೆಯದು ಸೂಕ್ಷ್ಮ ಶರೀರ ಅದು ಗಾಜಿನಹಾಗೆ ಇರುತ್ತದೆ ಸಾವು ಎಂದಾಗ ಏನು ಆಗುತ್ತದೆ ಅಂದರೆ….. ಜೀವ/ಆತ್ಮ ಎನ್ನುವುದು ಸೂಕ್ಷ್ಮ ಶರೀರದ ಜೊತೆ ದೇಹದಿಂದ ಹೊರ ಬರುತ್ತದೆ…. ಇದನ್ನೇ ಮರಣ ಎಂದು ಕರೆಯುವುದು ನೈಸರ್ಗಿಕ ಸಾವು ಹೀಗೆಯೇ ನಡೆಯುವುದು ನಾವಿಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಸತ್ತಿರುವವನಿಗೆ ತಾನು ಮರಣ ಹೊಂದಿದ್ದೇನೆ ಎಂದೆ ತಿಳಿದಿರುವುದಿಲ್ಲ ಏಕೆ? ಏಕೆಂದರೆ ಜೀವಂತವಾಗಿರುವ ಕಾರಣ… ಆತ್ಮಕ್ಕೆ ಸಾವು ಇಲ್ಲ ಪ್ರಪ್ರಥಮವಾಗಿ ಆತ್ಮ ದೇಹದಿಂದ ಹೊರಗೆ ಇದೆ ನಂತರ ಏನಾಗುತ್ತದೆ ಅವನ ಸಾವನ್ನು ಕೇಳಿ ಬಂಧು ಮಿತ್ರರು ಬಂದು ಅಳುತ್ತಾರೆ. ಆ ಆತ್ಮನಿಗೆ ಆಶ್ಚರ್ಯವಾಗಿ ಕಾಣುತ್ತದೆ, ನಾನು ಇಲ್ಲೇ ಇದ್ದೇನೆ ಆದರೂ ಇವರೇಕೆ ಅಳುತ್ತಿದ್ದಾರೆ ಎಂದು ಹಾಸ್ಯವೆನಿಸುತ್ತದೆ ಆಗ ಆ ಆತ್ಮ ತನ್ನ ಬಂಧುಗಳ ಬಳಿ ಹೋಗಿ ಹೇಳುತ್ತದೆ “ನಾನು ಇಲ್ಲೇ ಇದ್ದೇನೆ ” ಎಂದು ನಾನು ಇಲ್ಲೇ ಇದ್ದೇನೆ, ಏಕೆ ಎಲ್ಲರೂ ಅಳುತ್ತಿದ್ದೀರ ಎಂದು ರೋದಿಸುತ್ತದೆ. ಆದರೆ ಯಾರು ಗುರುತಿಸುವುದಿಲ್ಲ, ಏಕೆಂದರೆ ಆತ್ಮನನ್ನು ನೋಡಲು ಯಾರಿಂದಲು ಸಾಧ್ಯವಿಲ್ಲ ಈ ಸೂಕ್ಷ್ಮ ಶರೀರವನ್ನು ನೋಡಲು ಸಾಧ್ಯವಿಲ್ಲ ಸ್ವಲ್ಪ ಸಮಯದ ನಂತರ ತಿಳಿಯುತ್ತದೆ ಇಲ್ಲಿ ಮಲಗಿರುವುದು ನಾನೇ, ನಿಂತಿರುವುದು ನಾನೇ, ಏಕೆ ಹೀಗಾಯಿತು ಎಂದು ಆಗ ಆ ಆತ್ಮಕ್ಕೆ ಅರಿವಾಗುತ್ತೆ, ‘ಓ ಇದನ್ನೇ ಮರಣ ಎಂದು ಕರೆಯುತ್ತಾರೆಯೆ’ ಎಂದು ಆದರೆ ಇವರ ಅಳುವನ್ನು ನಿಲ್ಲಿಸುವುದು ಹೇಗೆ, ಮತ್ತೆ ದೇಹದ ಮುಖಾಂತರ ಎದ್ದು ಬರಬೇಕು… ಆಗ ಆತ್ಮವು ಪುನಃ ಆ ದೇಹದಲ್ಲಿ ಪ್ರವೇಶವಾಗಲು ಪ್ರಯತ್ನ ಪಡುತ್ತದೆ ಆದರೆ ಒಮ್ಮೆ ಆತ್ಮ ಹೊರಗೆ ಬಂದ ಮೇಲೆ ಪುನಃ ಹಿಂತಿರುಗಲು ಸಾಧ್ಯವಿಲ್ಲ. ಆಗ ಆತ್ಮಕ್ಕೆ ತಿಳಿಯುತ್ತದೆ ಮರಣದ ನಂತರ ಏನು ಮಾಡಲು ಸಾಧ್ಯವಿಲ್ಲವೆಂದು ಏತನ್ಮಧ್ಯೆ, ಒಂದು ಆಸಕ್ತಿದಾಯಕ ವಿಷಯ ನಡೆಯುತ್ತದೆ ಏನೆಂದರೆ…. ಕೆಲವು ದಿನಗಳ ಹಿಂದೆ ಬೇರೆ ಯಾರಾದರೂ ಮರಣ ಹೊಂದಿದವರು ಇರುತ್ತಾರಲ್ಲವೆ… ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಅವರು ತಿಳಿಸುತ್ತಾರೆ ನಿನ್ನ ಈ ಪಾತ್ರ ಮುಗಿದು ಹೋಯಿತು ಇನ್ನು ಆ ಹಳೆಯ ಶರೀರದಲ್ಲಿ ಪ್ರವೇಶಿಸಲು ಸಾಧ್ಯವಿಲ್ಲವೆಂದು ಆದರೆ ಆ ಆತ್ಮಕ್ಕೆ ನೋಡಲು ಸಾಧ್ಯವಾಗುತ್ತದೆ, ಯಾರು ಅವರನ್ನು ಪ್ರೀತಿಸುತ್ತಿದ್ದರು ಎಂದು ಕೆಲವರು ‘ಸಧ್ಯ ಈ ಮನುಷ್ಯ ಸತ್ತುಹೋದನಲ್ಲ ಒಳ್ಳೆಯದಾಯಿತು’ ಎಂದು ಈ ಆತ್ಮಕ್ಕೆ ಗೊತ್ತಾಗುತ್ತದೆ ‘ಹಾಗಾದರೆ ಇವರೆಲ್ಲರೂ ಇಷ್ಟು ಕಾಲ ಒಳ್ಳೆಯವರೆಂದು ನಟಿಸುತ್ತಿದ್ದಾರೆ’ ಸ್ವತಃ ನಾವೇ ಮೋಸ ಹೋದೆವು ಎಂದು ತಿಳಿಯುತ್ತದೆ ಅರ್ಥವಾಯಿತೇ? ಆ ಶರೀರಕ್ಕೆ ಉತ್ತರಕ್ರಿಯೆ ಮಾಡುತ್ತಾರೆ, ಕೆಲವರು ಸುಡುತ್ತಾರೆ, ಕೆಲವರು ಹೂಳುತ್ತಾರೆ ಆತ್ಮವು ಇದೆಲ್ಲವನ್ನು ವೀಕ್ಷಿಸುತ್ತಿರುತ್ತದೆ ಹಿಂದಿನ ವಿಡಿಯೋದಲ್ಲಿ ನಾನು ತಿಳಿಸಿದ್ದೆ ಹೇಗೆ ಜನ್ಮ ತೆಗೆದುಕೊಳ್ಳುತ್ತಾರೆ ಎಂದು ನೈಸರ್ಗಿಕ ಮರಣವಾದರೆ ಹದಿಮೂರು ದಿನಗಳ ನಂತರ ಈಗಾಗಲೇ ಮೂರು ತಿಂಗಳ ಗರ್ಭ ಧರಿಸುವ ಸ್ತ್ರೀಯ ಒಳಗೆ ಆತ್ಮ ಪ್ರವೇಶಿಸುತ್ತದೆ, ನೀವು ಬೇಕಿದ್ದರೆ ಆ ವಿಡಿಯೋವನ್ನು ಪುನಃ ನೋಡಬಹುದು ಈಗ ಮುಂದಿನ ಭಾಗ ‘ಅಸಹಜ ಸಾವು’ ಅಸಹಜ ಸಾವು ಎಂದರೆ ಏನು? ಅದರಲ್ಲಿ ಎರಡು ವಿಧವಿದೆ ಒಂದು ಆತ್ಮಹತ್ಯೆ ಮತ್ತ್ತೊಂದು ಅಪಘಾತವಾಗಿ ಸಾಯುವುದು ಆತ್ಮಹತ್ಯೆ ಅಂದರೆ ಅವರು ಸಾಯಬೇಕು ಎಂದು ಬಯಸಿ ಮರಣ ಹೊಂದುತ್ತಾರೆ ಅಪಘಾತವಾಗಿ ಸಾಯುವುದು ಹಾಗಲ್ಲ ಇಲ್ಲಿ ಸಾಯುತ್ತೇನೆ ಎನ್ನುವ ಪರಿಕಲ್ಪನೆಯು ಇರುವುದಿಲ್ಲ ಅಕಸ್ಮಾತ್ತಾಗಿ ಸಾವು ಸಂಭವಿಸುತ್ತದೆ ಇಲ್ಲೂ ಅದೇ ಪರಿಕಲ್ಪನೆ, ಆತ್ಮ ಶರೀರ ಬಿಟ್ಟು ಹೊರಗೆ ಬರುತ್ತದೆ ತಾನು ಮರಣಿಸಿದ್ದೇನೆ ಎಂದು ತಿಳಿದಿರುವುದಿಲ್ಲ, ಎಲ್ಲರು ಅಳುವುದನ್ನು ನೋಡಿ ತಿಳಿದುಕೊಳ್ಳುತ್ತದೆ ಸಹಜ ಸಾವಿಗು ಮತ್ತು ಅಸಹಜ ಸಾವಿಗು ಇರುವ ವ್ಯತ್ಯಾಸವೇನೆಂದರೆ… ಸಹಜವಾಗಿ ಮರಣಿಸಿದರೆ ಹದಿಮೂರು ದಿನಗಳ ನಂತರ ಇನ್ನೊಂದು ಗರ್ಭದಲ್ಲಿ ಪ್ರವೇಶ ಮಾಡುತ್ತದೆ ಅಸಹಜವಾಗಿ ಮರಣಿಸಿದ್ದರೆ ಗರ್ಭದಲ್ಲಿ ಪ್ರವೇಶಿಸಲು ಮೂರರಿಂದ ನಾಲ್ಕು ತಿಂಗಳ ಕಾಲ ಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ನೀವು Youtubeನಲ್ಲಿ Brahmakumaris ’13th Day’ ಎನ್ನುವ ವಿಡಿಯೋವನ್ನು ನೀವು ನೋಡಬಹುದು ರಾಜಯೋಗವನ್ನು ಕಲಿತ ಮೇಲೆ ಈ ವಿಷಯಗಳು ನನಗೆ ತಿಳಿಯಿತು ನೀವೀಗ ಯೋಚಿಸಬಹುದು ಸರಿ .. ಆತ್ಮಹತ್ಯೆ ಮಾಡಿಕೊಂಡಿರುವವನಿಗೆ ಹೊಸ ಜನ್ಮ ಸಿಗಲು ಮೂರು ತಿಂಗಳು ಆಗಬಹುದು ಆದರೆ, ಅಪಘಾತವಾಗಿ ಮರಣ ಹೊಂದಿದವನು ಏನು ತಪ್ಪು ಮಾಡಿದ್ದಾನೆ? ಅವನಿಗೆ ಏಕೆ ಮೂರು ತಿಂಗಳವರೆಗೆ ಹೊಸ ಜನ್ಮ ಸಿಗುವುದಿಲ್ಲ ಎಂದು? ಇಲ್ಲಿ ನೀವು ಕರ್ಮ ಸಿದ್ಧಾಂತದ ಬಗ್ಗೆ ತಿಳಿದುಕೊಳ್ಳಬೇಕು ಕರ್ಮ ಸಿದ್ಧಾಂತದ ಅನುಸಾರ ಎಲ್ಲರೂ ಅಪಘಾತವಾಗಿ ಮರಣ ಹೊಂದುವುದಿಲ್ಲ ಕರ್ಮದ ಅನುಸಾರ ಒಬ್ಬರಿಗೊಬ್ಬರು ಕೊಂದಿರಬಹುದು, ಅದು ನಿಖರವಾಗಿ ನಡೆಯುತ್ತದೆ ಕರ್ಮ ನಿಯಮದ ಪ್ರಕಾರ ಅವರವರ ಲೆಕ್ಕಾಚಾರ ಪೂರ್ಣವಾಗುತ್ತದೆ ಇಲ್ಲವಾದರೆ ನಾವು ಯಾವುದೇ ವಿವರಣೆಯನ್ನು ನೀಡಲು ಸಾಧ್ಯವಿಲ್ಲ ಹೀಗೆ ಮರಣವನ್ನು ಹೊಂದಿರುತ್ತಾರೆ ಕರ್ಮ ಎನ್ನುವುದು ಈ ರೀತಿ ನಡೆಯುತ್ತದೆ ಹಾಗಾದರೆ ಶರೀರ ಬಿಟ್ಟಿರುವವರು ಏನು ಮಾಡುತ್ತಾರೆ? ಅಪಘಾತದಲ್ಲಿ ಮರಣ ಹೊಂದಿದವರಿಗೆ ಶರೀರ ಬೇಕಲ್ಲವೆ.. 3 ಅಥವಾ 4 ತಿಂಗಳು ಈ ಸೂಕ್ಷ್ಮ ಶರೀರದ ಮೂಲಕ ಅಲೆದಾಡಬೇಕು ಮನೆಗೆ ಹಿಂದಿರುಗಲು ಸಾಧ್ಯವಿಲ್ಲ ತಿಳಿಯಿರಿ ಮೇಲಿಂದ ಬರಲು ಮಾತ್ರ ಸಾಧ್ಯ ಮರಣಿಸಿದ ಹದಿಮೂರು ದಿನದ ನಂತರ ಇನ್ನೊಂದು ಶರೀರ ಪ್ರವೇಶಿಸಬೇಕು, ಹೀಗೆ ನಿರಂತರವಾಗಿ ನಡೆಯುತ್ತಿರುತ್ತದೆ ಆದರೆ ಮನೆಗೆ ತೆರೆಳಲು ಸಾಧ್ಯವಿಲ್ಲ ಈ ಸೃಷ್ಟಿ ನಾಟಕ 5000 ವರ್ಷಗಳ ಕಾಲ ನಡೆಯುತ್ತದೆ ಅದನ್ನು ‘ಕಲ್ಪ’ ಎಂದು ಕರೆಯಲಾಗುತ್ತದೆ 5000 ವರ್ಷದಲ್ಲಿ ಒಂದೇ ಬಾರಿ ಪರಮಾತ್ಮನು ಬಂದು ನಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ನಮ್ಮ ಮನೆಯಾದ ‘ಶಾಂತಿಧಾಮ’ಕ್ಕೆ ಕರೆದುಕೊಂಡು ಹೋಗುತ್ತಾರೆ, ಅವರು ಬಂದಾಗ ಮಾತ್ರ ನಾವು ಹಿಂದಿರುಗಿ ಹೋಗಲು ಸಾಧ್ಯ ಇದನ್ನೇ ‘Judgement Day’ ಎಂದು Bibleನಲ್ಲಿ ತಿಳಿಸಿದ್ದಾರೆ, ಇದು ಸತ್ಯ ಇದರ ಬಗ್ಗೆ ಇನ್ನೊಂದು ವಿಡಿಯೋದಲ್ಲಿ ವಿವರವಾಗಿ ತಿಳಿಸುತ್ತೇನೆ ಈ ವಿಷಯಗಳನ್ನು ನಾನು ರಾಜಯೋಗವನ್ನು ಕಲಿತ ಮೇಲೆ ತಿಳಿದುಕೊಂಡೆ ಇದರ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ನೀವು YouTubeನಲ್ಲಿ ‘Brahma Kumaris 13th Day’ ಎನ್ನುವ ವಿಡಿಯೋ ನೋಡಿ ಮತ್ತ್ತೊಂದು ವಿಷಯ ಹೇಳುತ್ತೇನೆ, ಅದು ಯಮಧರ್ಮನ ಬಗ್ಗೆ ನಾವು ಭಾವಿಸಿದ್ದೇವೆ ಯಮಧರ್ಮನು ಕೋಣದ ಮೇಲೆ ಬಂದು ನಮ್ಮನ್ನು ಎಳೆದುಕೊಂಡು ಹೋಗುತ್ತಾನೆ ಎಂದು ಇದೆಲ್ಲ ಅಸತ್ಯ, ಯಮಧರ್ಮ ಅನ್ನುವವನು ಇಲ್ಲವೇ ಇಲ್ಲ ಈ ನಾಟಕವು ಪೂರ್ವ ನಿಶ್ಚಿತವಾಗಿದೆ ಈ ಶರೀರದಲ್ಲಿ ಹೋಗಬೇಕು, ನಿರ್ದಿಷ್ಟ ಕಾಲ ಪಾತ್ರ ಮಾಡಬೇಕು ನಂತರ ನಿರ್ಗಮಿಸಬೇಕು ಎಂದು ಪೂರ್ವ ನಿರ್ಧರಿತವಾಗಿದೆ ಆತ್ಮ ಹೇಗೆ ತಾನಾಗಿ ಪ್ರವೇಶವಾಗುತ್ತದೋ ಹಾಗೆಯೇ ತಾನಾಗಿಯೇ ನಿರ್ಗಮಿಸುತ್ತದೆ ಈ ಯಮಧರ್ಮ ಎನ್ನುವುದು ಮನುಷ್ಯನು ಸೃಷ್ಟಿಸಿರುವ ಕಥೆಯಷ್ಟೆ ಇದು ಕೆಲವರಿಗೆ ಕೇಳಲು ಕಷ್ಟಕರವಾಗಿರಬಹುದು ನಾನು ಜನ್ಮತಃ ‘ಹಿಂದೂ’ವೆ ಆದರೆ ನಾನು ಎಲ್ಲವನ್ನು ನಂಬಲು ಸಿದ್ಧನಿಲ್ಲ ಇದು ಮುಂದುವರಿಯುತ್ತಾ ನಿಮಗೇ ತಿಳಿಯುತ್ತದೆ ನಿಮಗೆ ಈ ವಿಡಿಯೋ ಇಷ್ಟವಾಗಿದ್ದಲ್ಲಿ Subscribe ಮಾಡಿ ಕೆಳಗೆ ಒಂದು ಕೆಂಪು ಗುಂಡಿಯಿದೆ, ಅದನ್ನು Click ಮಾಡಿ ಇದೊಂದು ಸರಣಿಯ ಕಾರ್ಯಕ್ರಮವಾಗಿದೆ, ನೀವು ‘Rajayoga’ ಎನ್ನುವ Playlist ಮೂಲಕ ವೀಕ್ಷಿಸಬಹುದು ಪ್ರಪ್ರಥಮವಾಗಿ ಈ ಮರಣದ ವಿಷಯದ ಬಗ್ಗೆ ನೀವು ವಿಡಿಯೋ ನೋಡಿದರೆ, ನಿಮಗೆ ಅರ್ಥವಾಗದೆ ಇರಬಹುದು ಹಾಗಾಗಿ ಸರಣಿಯ ಮೂಲಕ ವೀಕ್ಷಿಸಿದರೆ ನಿಮಗೆ ಅರ್ಥವಾಗುತ್ತದೆ ನಿಮಗೆ ಈ ವಿಡಿಯೋ ಬಹಳ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿಗೆ Share ಮಾಡಿ ಹೆಚ್ಚಿನ ಮಂದಿ ವೀಕ್ಷಿಸಿದರೆ, Like ಅಥವಾ Share ಮಾಡಿದರೆ, ಅದೇ ನನಗೊಂದು ಪ್ರೇರಣೆ ಹಾಗಾಗಿ ದಯವಿಟ್ಟು ವೀಕ್ಷಿಸಿ ಧನ್ಯವಾದಗಳು!